Surprise Me!

ಕಾಶೀನಾಥ್ ರನ್ನ ನೆನೆದು ಕಂಬನಿ ಮಿಡಿದ ನಟ ಶಿವ ರಾಜ್ ಕುಮಾರ್ | Filmibeat Kannada

2018-01-18 1,603 Dailymotion

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಕಾಶಿನಾಥ್ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಶಿನಾಥ್ ಅವರ ಅಂತಿಮ ದರ್ಶನ ಪಡೆದ ನಟ ಶಿವರಾಜ್ ಕುಮಾರ್, "ಕಾಶಿನಾಥ್ ಅವರ ನಿರ್ದೇಶನದಲ್ಲಿ ಅಭಿನಯಿಸುವ ಆಸೆ ಇತ್ತು.

ಅವರ ಧ್ವನಿಯಲ್ಲಿ ಒಂದು ಇನ್ನೊಸೆನ್ಸ್ ಇತ್ತು. ಒಳ್ಳೆಯ ನಟ, ನಮ್ಮ ಇಂಡಸ್ಟ್ರಿಗೆ ತುಂಬಾ ಬೇಕಾದವರು. ಭೇಟಿ ಆದ ಸಂದರ್ಭದಲ್ಲಿ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು. ಚಿತ್ರರಂಗದ ಲೆಜೆಂಡ್... ಅವರನ್ನ ನಾವು ಕಳೆದುಕೊಂಡಿದ್ದೇವೆ" ಎಂದರು.

ಸದ್ಯ ಎನ್.ಆರ್.ಕಾಲೋನಿಯ ಎ.ಪಿ.ಎಸ್ ಕಾಲೇಜು ಮೈದಾನದಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಎನ್.ಆರ್.ಕಾಲೋನಿಯಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನ ಪಡೆಯಬಹುದಾಗಿದೆ.

ಚಾಮರಾಜಪೇಟೆಯ ಟಿ.ಆರ್.ಮಿಲ್ ನಲ್ಲಿ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕಾಶಿನಾಥ್ ಅವರ ಪುತ್ರಿ ಅಮೃತವರ್ಷಿಣಿ ದುಬೈನಲ್ಲಿ ವಾಸವಾಗಿದ್ದು ಪುತ್ರಿ ಬೆಂಗಳೂರಿಗೆ ತಲುಪಿದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ.

Kannada Actor Shivaraj Kumar visited Sri Shankara Cancer Hospital and expressed his condolences to Kashinath.

Buy Now on CodeCanyon